ಇಮ್ರಾನ್ ಹಶ್ಮಿ ರೇಣುಕಾಚಾರ್ಯನೂ ತನುಶ್ರೀ ದತ್ತಾ ನರ್ಸ್ ಜಯಲಕ್ಷ್ಮಿನೂ…!
ಜಯಲಕ್ಷ್ಮಿ ಬಿಡುಗಡೆ ಮಾಡಿದ ಬರೀ hot scene ಹೊಂದಿರೋ ಒಂದು Bond kiss ನೋಡಿನೇ ಒಬ್ಬ ಪತ್ರಕರ್ತ “ಕಾಮೋದ್ರೇಕಗೊಳಿಸುವ ಚಿತ್ರಗಳು” ಅಂತಾ ಬರೆದಿದ್ದ. ಇಷ್ಟಕ್ಕೇ excite ಆದ್ರೆ ಹೆಂಗಯ್ಯಾ? ಜಯಲಕ್ಷ್ಮಿ ಇನ್ನೂ ಸಿಡಿ ಬಿಡ್ತವ್ಳಂತೆ..! ಇನ್ನು ಮನೇಲಿ ಕೇಬಲ್‌ನಲ್ಲಿ ಬರೋ ಮ್ಯೂಸಿಕ್ ಚಾಲ್‌ಗಳನ್ನ, ಅದ್ರಲ್ಲಿ ಬರೋ “hot scene“ಗಳನ್ನ ನೋಡಿದರೆ ಆತ ಏನು ಮಾಡಿಕೊಳ್ಳುತ್ತಾನೋ..?!!
ರೇಣುಕಾಚಾರ್ಯ ರಾಜಕೀಯಕ್ಕೆ ಬಂದು ಬಹಳ ದಿವ್ಸ ಕಳ್ದಿಲ್ಲ ಆಗ್ಲೇ ಭಾಳ ಜನಗಳ ಹತ್ರ ದ್ವೇಷ ಕಟ್ಕೊಂಡ. ತನ್ನ ಸುತ್ತ ಪುಂಡು ಪೋಕರಿಗಳ ಹಿಂಡು ಕಟ್ಟಿಕೊಂಡ. ಶಾಂತನಗೌಡನ್ನ ತುಳಿಯೋದಕ್ಕೆ ಹೋಗಿ ತಾನು ನಗೆಪಾಟಲಿಗೀಡಾಗ್ತಾ ಇದಾನೆ. “ಎಂಪಿ”ರೇಣುಕಾಚಾರ್ಯ ಈಗ “ಎಮ್ಮೆಲ್ಲೆ” ಸೀಟು ಉಳಿಸಿಕೊಂಡು ಹೋದ್ರೆ ಸಾಕಾಗಿದೆ. ಶಾಂತನಗೌಡ ಇದನ್ನೇ ಉಪಯೋಗಿಸಿಕೊಂಡು ಜಯಲಕ್ಷ್ಮಿನ ಛೂ ಬಿಡ್ತವ್ನೆ! ನಂಗೆ ಅನ್ಯಾಯ ಆಗಿದೆ ಅಂತಾ ಹೇಳ್ತವ್ಳಲ್ಲ ಜಯಲಕ್ಷ್ಮಿ, ಇದಕ್ಕೇನು ಪರಿಹಾರ ಹೇಳ್ತೀಯಮ್ಮಾ ಅಂದ್ರೆ ಅದಕ್ಕೆ ಉತ್ರನೇ ಹೇಳಲ್ಲ. ನಂಗೆ ಒಬ್ಬ ಜನಪ್ರತಿನಿಧಿಯಿಂದ ಅನ್ಯಾಯ ಆಗಿದೆ. ಅದಕ್ಕೇ ಮಹಿಳಾ ಆಯೋಗಕ್ಕೆ ಹೋಗೀವ್ನಿ ಅಂತಾ ಹೇಳ್ತಾಳೆ. ಬೆಂಗ್ಳೂರಲ್ಲೇ ಒಬ್ಬನ್ನ ಕಟ್ಕೊಂಡು ಬಿಟ್ಟು, ಸಧ್ಯಕ್ಕೆ ರಾಷ್ಟಮಟ್ಟದಲ್ಲಿ ಹೆಸರು ಮಾಡಕ್ಕೆ ಹೊಂಟವ್ಳೆ! ಲೈಂಗಿಕ ಕಿರುಕುಳ ಅಂತಾಳಲ್ಲ ಇಷ್ಟ್ ದಿನ ಏನ್ ಮಾಡ್ತಿದ್ಳು? ಎಂಟು ವರ್ಷ ಆದ್ಮೇಲೆ ಯಾಕ್ ವೈಮನಸ್ಯ? ಬಿಡುಗಡೆ ಮಾಡಿರೋ ಎಲ್ಲಾ ಚಿತ್ರಗಳಲ್ಲೂ ಬರೀ ಕ್ಲೋಸ್‌ಅಪ್ ನಗುವೇ ಇದೆಯಲ್ಲಾ ಜಯಲಕ್ಷ್ಮೀ..? ನೀನೇ ಎಲ್ಲದರಲ್ಲೂ ಕ್ಲೋಸ್‌ಅಪ್ ಆಗಿ ನಕ್ಕು ಅದಕ್ಕೆ ಲೈಂಗಿಕ ಶೋಷಣೆ ಅಂದ್ರೆ ನಂಬೋಕಾಗುತ್ತಾ? ಎಲ್ಲದಕ್ಕೂ ಉತ್ರ ಜಲ್ದೀನೇ ಸಿಗ್ಬೋದು.
ರೇಣುಕಾಚಾರ್ಯಂಗೆ ಬಿ.ಜೆ.ಪಿಯ ಸಧ್ಯದ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ನಿಷೇಧಿಸಿದ್ದಾರಂತೆ. ಪಾಪ ನೀರಿಗೆ ಬೀಳೋರು ದಡದಲ್ಲಿರೋರನ್ನೂ ಎಳೆದುಕೊಂಡ್ರೆ ಹೆಂಗೆ? ರೇಣುಕಾಚಾರ್ಯ ತನ್ನ ಹೆಸರು ಕೆಡ್ಸಿಕೊಳ್ಳೋದಲ್ಲ್ದೆ ಪಾಪ ರಾಜಕೀಯ ಗುರು ಯಡಿಯೂರಪ್ಪನ ಹೆಸರನ್ನ ಶೋಭಾ ಕರದ್ಲಾಂಜೆ ಜೊತೆ ಜೋಡಿಸ್ತವ್ನೆ! ರೇಣುಕಾಚಾರ್ಯ ಸಧ್ಯಕ್ಕೆ ರಾಜ್ಯದಲ್ಲಿ hot news ಮಾಡ್ತವ್ನೆ. ಸುಮ್ನೆ ಈ ರಾಜಕೀಯ ಬಿಟ್ಟು ಬಾಲಿವುಡ್‌ಗಾದ್ರೂ ಹೋದ್ರೆ ಇಮ್ರಾನ್ ಹಶ್ಮಿಯಂಗೆ “ಬಾಂಡ್ ಕಿಂಗ್” ಆದ್ರೂ ಆಗಬಹುದು!
No comments yet
Leave a reply