ಡೆಕ್ಕನ್ ಕ್ರೋನಿಕಲ್ ರಿಲೀಸು – Young Mind ಗಳಿಗೆ ರಿಲೀಫು..!
ವಾರದ ಕೆಳಗೆ ಡೆಕ್ಕನ್ ಕ್ರೋನಿಕಲ್ ಅನ್ನೋ ಹೊಸ ಇಂಗ್ಳೀಷ್ ಪತ್ರಿಕೆ BENGALURU ಗೆ ಕಾಲಿಟ್ಟಿದೆ. ತನ್ನ ಪ್ರಚಾರಕ್ಕಾಗಿ ಬೆಂಗಳೂರಿನ ಎಲ್ಲ ಕಡೆ ಟ್ರಾಫಿಕ್ ಸಿಗ್ನಲ್ ಜಾಮ್‍ಗಳಲ್ಲಿ, ಜನ ನೋಡುವೆಡೆಗಳಲ್ಲಿ ತನ್ನ ಜಾಹೀರಾತನ್ನ ಪ್ರದರ್ಶಿಸಿದೆ. BOTTOM LINE ನಲ್ಲಿ FOR YOUNG MINDS ಅಂತಾ ಹೇಳಿದೆ. ಒಪ್ಪೋಣ. YOUNGISTAN ಮಂದಿಗೆ ತುಂಬಾ HOT ಇರುವ ಪತ್ರಿಕೆಗಳೇ ಬೇಕು. ಹೊಸ ಪತ್ರಿಕೆಯಾಗಿ ಗಮನ ಸೆಳೆಯಲಿಕ್ಕೆ ಏನೆಲ್ಲ ಮಾಡಬೇಕೋ ಎಲ್ಲಾ ಮಾಡ್ತಾ ಇದೆ. ಹೊಸದಾಗಿ ಬಾಲಿವುಡ್ ಗೆ ಬರುವ ಹೀರೋಯಿನ್ನುಗಳು ಒಂದಿಷ್ಟ್ ಸುದ್ದಿ ಮಾಡೋಕ್ಕೆ HOT HOT ಆಗಿ ಕಾಣಿಸಿಕೊಂಡು, ಸೆಳೆಯಲಿಕ್ಕೆ ಅಲ್ಲ ತಯ್ಯಾರಿ ಮಾಡುವಂತೆಯೇ ಹೊಸ ಕ್ಷೇತ್ರಕ್ಕೆ ಕಾಲಿಡುವ ಹೊಸಬರಿಗೆ ಈ ಪೀಕಲಾಟ.
ಡೆಕ್ಕನ್ ಕ್ರೋನಿಕಲ್ ತನ್ನ ಎಲ್ಲ ವರದಿಗಳಲ್ಲಿ, BENGALURU ಅಂತಲೇ ನಮೂದಿಸಿ ಎಲ್ಲ ಕನ್ನಡ ಪ್ರಿಯರ ಮನ ಗೆದ್ದಿದೆ. ಅಸಲಿಗೆ ಅವರು ಪಾಪ BENGALURU ಬಳಸಲಿಕ್ಕೆ ಕಾರಣ FOR CHANGE..! ಎಲ್ಲರಂತೆಯೇ ತಾನಾಗಿಬಿಟ್ಟರೆ ತನ್ನ ಖದರ್ ಏನು ಉಳೀತು..? ಹಂಗಾಗೇ ಎಲ್ಲ ಜಾಹೀರಾತುಗಳಲ್ಲಿ ಬಿಕಿನಿ ಹುಡುಗಿಯೊಬ್ಬಳ ಮೈ ಮೇಲೆ ವರದಿ ಇವೆ. ಆದ್ರೆ, ಇಲ್ಲಿ ಹೇಳಬೇಕಾದ ಸಂಗತಿ ಎಂದರೆ ಇಲ್ಲಿ ಪ್ರಸ್ತುತಪಡಿಸಲಾಗಿರುವ ಚಿತ್ರದಲ್ಲಿ ಆ ಹುಡುಗಿ ಫೋಸು ನೀಡಕ್ಕೆ ಹೊಗಿ ಒಳ್ಳೇ ಸಂಡಾಸಕ್ಕೆ ಕುಂತಂಗಾಗಿದೆಯಲ್ಲಾ ಅಂತಾ ತಲೆ ಕೆರೆದುಕೊಳ್ಳಂಗಾಗಿದೆ. ಇದು ಸತ್ಯನೋ ಅಲ್ಲವೋ ನೀವೇ ತೀರ್ಮಾನಿಸಿ..!
ಇನ್ನೊಂದ್ ವಿಷ್ಯ : ಪ್ರತಿ ದಿನವೂ ಬಿಕಿನಿ ಹುಡುಗಿ ಹೀಗೆ ಪತ್ರಿಕೆ ಬದಲು ತಾನೇ ಮೈಮೇಲೆ ಸುದ್ದಿ ಛಾಪಿಸಿಕೊಂಡು ಬಂದರೆ, ಯಾರು ತಾನೇ ಬೇಡ ಅಂದಾರು..?!!
No comments yet
Leave a reply
